Kannada Sex Jokes- 5 | ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 1
1) ರೈಲಿನ ಟಿಕೆಟ್ ಕೌಂಟರ್ ನವ ಎಲ್ಲಿಗೆ ?? ಅಂತಾ ಮೂರನೇ ಬಾರಿ ಕೇಳಿದ.. ಅವನು ಅವಳ ಕಡೆ ನೋಡಿದ. ಅವಳು ಇನ್ನೂಊರುಗಳ ಚಾರ್ಟ್ ನೋಡುತ್ತಿದ್ದಳು.
2) ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಮನೆಯ ರೇಷನ್ ಖಾಲಿಯಾಗಿತ್ತು. ಅವಳು ಹೇಗೋ ಮಾಡಿ ರೇಷನ್ ತಂದು ಅಡಿಗೆ ಮಾಡಿದ್ದಳು. ಊಟ ಬಡಿಸಲು ಬಗ್ಗಿದಾಗ ತಾಳಿ ಕಾಣದಾದಾಗ, ಅವನ ಗೊಂದಲಗಳಿಗೆ ತೆರೆ ಬಿತ್ತು.
3) ಅವತ್ತೇ ಅವರು ಮನೆ ಖಾಲಿ ಮಾಡಿಕೊಂಡು ಊರು ಬಿಟ್ಟು ಹೋಗಬೇಕಾಗಿತ್ತು. ಮುದ್ದು ಮಗ ಎದುರುಮನೆಯ ತನ್ನಗೆಳೆಯ ಊರಿಂದ ಬರುವವರೆಗೂ ಇಲ್ಲಿಯೇ ಇರುತ್ತೇನೆಂದು ಹಠ ಮಾಡಿ ಕೂತಿದ್ದ. ಇವನ ಆಟದ ಸಾಮಾನನ್ನು ಅವನು ಕಡಒಯ್ದಿದ್ದ.
4) ಜೀವನದಲ್ಲಿ ಕೊನೆ ಬಾರಿ ನಡೆಸಿಕೊಡಬೇಕಾಗಿದ್ದ ಸಂಗೀತ ಸಂಜೆಯ ಕಾರ್ಯಕ್ರಮದ ದಿನದ ಮುಂಜಾವಿನಲ್ಲಿ ಆ ಹೆಸರಾಂತ ಗಾಯಕನ ದನಿ ಒಡೆದು ಹೋಗಿತ್ತು.
5) ಆಸ್ಪತ್ರೆಯ ಐ.ಸಿ.ಯು. ವಾರ್ಡಿನಲ್ಲಿ ಸಾವಿನ ಕ್ಷಣಗಳನ್ನು ಎಣಿಸುತ್ತಾ ಮಲಗಿದ್ದ ಮುದುಕನೊಬ್ಬ. ಪ್ರತಿ ಬಾರಿ ಮೊಮ್ಮಗನ ಮುದ್ದು ಮಾತುಗಳನ್ನು ಕೇಳಿದಾಗಲೆಲ್ಲಾ ಇನ್ನಷ್ಟು ಕ್ಷಣಗಳಿಗೆ ಮುಂದೂಡುತ್ತಿದ್ದ.
6) ಜನಸಂಖ್ಯಾ ನಿಯಂತ್ರಣಾಧಿಕಾರಿ ಮನೆಯ ನಾಯಿಯೊಂದು ಒಮ್ಮೆಲೆ 7 ಮರಿಗಳನ್ನು ಹಾಕಿ ತನ್ನ ಬಲ ಪ್ರದರ್ಶಿಸಿತು.
ಇನ್ನೊಂದೆರಡು..
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 2
1) ಕರೆಂಟ್ ಇಲ್ಲದ ಮನೆಗೆ ಲಾಟೀನು ಹಿಡಿದು ಬಂದವಳು ಜೀವನ ಪೂತಿ ಬೆಳಗಿದಳು.
2) ಜಗಳವಾಡಿಕೊಂಡ ಸಹೋದ್ಯೋಗಿಗಳನ್ನು ಮ್ಯಾನೇಜರು ಕೊಟ್ಟ ಪ್ರಾಜೆಕ್ಟ್ ವರ್ಕ್ ಒಂದು ಮಾಡಿತು.
3) ಉತ್ತಮವಾಗಿ ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ಕಂಪನಿಯ ನೌಕರನೊಬ್ಬ ರಿಷೆಷನ್ ಭಯದಿಂದ ಇನ್ನೊಂದು ಕಂಪನಿಗೆ ಅಪ್ಲಿಕೇಷನ್ ಹಾಕಿ, ಇದ್ದ ಕೆಲಸವನ್ನು ಕಳೆದುಕೊಂಡ.
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 3
1) ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//
ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//
ಅವನು P.U.C. ನಲ್ಲಿ
ಫೇಲ್ ಆದ
ಕಾರಣ,
ಅವಳು ಯಾರೋ
ಪ್ರತಿಭಾ ಅಂತಾ!!!
2) ಅವನು ಹೇಳಿದ್ದು ಇಷ್ಟೇ
I LOVE U ಗಾಯಿತ್ರಿ //ವ್ಹಾ ವ್ಹಾ//
ಅವನು ಹೇಳಿದ್ದು
ಇಷ್ಟೇ,
I LOVE YOU ಗಾಯಿತ್ರಿ..
ಆಗಿದ್ದು ಇಷ್ಟೇ..
ಮುಖದ ಮೇಲೆ ಗಾಯ THREE!!
ಮಾತು ಬೆಳ್ಳಿ.. ಮೌನ ಬಂಗಾರ.. ಇದು ಮಹೇಶಣ್ಣನ Status ಮೆಸೇಜ್
ನನ್ನವಳು ಇವತ್ತು ಮಾತನಾಡದೇ ಮೌನವಾಗಿದ್ದಾಳೆ…
ನೈಸ್ ಮಾಡಲು ಮೋಸ್ಟ್ಲಿ ಬಂಗಾರ ಕೊಡಿಸಬೇಕೋ ಏನೋ???
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 4
ನನ್ನವಳು ಮಗು ಥರಾ ಮುದ್ದಾಗಿದಾಳೆ.. ಅದಕ್ಕೆ ಈ ತಿಂಗಳು ಅವಳಿಗಾಗಿ Johnson & Johnson ಬೇಬಿ ಸೋಪ್ ತಗೊಂಡು ಬಂದಿದೀನಿ.
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 5
ಇಷ್ಟಪಟ್ಟ ಹುಡುಗಿಯ ಪ್ರೀತಿಯನ್ನು ಕಷ್ಟಪಟ್ಟು ಪಡೆದುಕೊಂಡಾಗ ಆಗುವ ಸಂತೋಷದ ನೂರು ಪಟ್ಟು ದುಃಖ ಅವಳನ್ನು ಕಳೆದುಕೊಂಡಾಗ ಆಗುತ್ತೆ.
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 6
ಇದೇ ಮೊದಲನೇ ಬಾರಿ ಆಂಗ್ಲ ಭಾಷೆಯಲ್ಲಿ ಟ್ವೀಟ್ ಬರೆಯೋಕೆ ಟ್ರೈ ಮಾಡಿದೀನಿ…
(ಗ್ರಾಮರ್ ತಪ್ಪಿದ್ರೆ ಹೇಳಿ…)
ಯಳವತ್ತಿ ಟ್ವೀಟ್:- If he/she is thinking about someone and talking about that person with his friend means that he/she impressed..
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 7
I LOVE MY INDIA Coz, It is full of sentimentals, “ಉಪ್ಪಿನ ಋಣ ತೀರಿಸೋಕೆ ಆಗಲ್ಲ” ಅಂತಾ ಕಳ್ಳನು ಸಹ ಅದನ್ನು ಕದ್ದುಕೊಂಡು ಹೋಗೋಲ್ಲ.
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 8
ಯಳವತ್ತಿ ಟ್ವೀಟ್: ನಾನು ಮತ್ತು ನನ್ನವಳು ಸಿನಿಮಾಕ್ಕೆ ಹೋಗಿದ್ವಿ.. ಅವಳು ಮಾತ್ರ ಸಿನಿಮಾ ನೋಡಿದಳು.. ಮನೆಗೆ ಬಂದ ಕೂಡಲೇ ನನ್ನವಳಿಗೆ ದೃಷ್ಟಿ ತೆಗೆದೆ..
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 9
ಸೈಕಾಲಜಿ ಎಕ್ಸಾಮ್ ನಲ್ಲಿ, ಪ್ರೀತಿ ಅನ್ನೋದನ್ನು 20 ಮಾರ್ಕ್ಸ್ ಗೆ ವಿವರಿಸಿ ಅಂತಾ ಕೇಳಿದರು.. ನನ್ನವಳ ಹೆಸರನ್ನು 20 ಸಲ ಬರೆದು ಬಂದಿದ್ದೀನಿ..
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 10
ಅವಳ ಫೋಟೋ ಅಂದ್ರೆ, ನಂಗೆ ಇಷ್ಟ & ಕಷ್ಟ..ಎಷ್ಟು ಮುತ್ತು ಕೊಟ್ಟರೂ ಸಹ ಕಿರಿಕ್ ಮಾಡದೇ ಸುಮ್ನೆ ಇರುತ್ತಲ್ಲ..ಅದು ಇಷ್ಟ.. ಮತ್ತು ಅದೇ ಕಷ್ಟ..
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 11
ನಾನು ಸೊಳ್ಳೆ ಬತ್ತಿ ತರಲಿಲ್ಲ ಅಂತಾ.. ಸೊಳ್ಳೆಯೊಂದು ನನ್ನವಳ ಕೆನ್ನೆಯನ್ನು ಕಚ್ಚಿತು.. ನನ್ನವಳಿಗೆ ಕೋಪ ಬಂದು ನನ್ನ ಕೆನ್ನೆಯನ್ನು ಕಚ್ಚಿದಳು.
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 12
ಶುಭಶಂಕರಿ:- ನನ್ ಅಪ್ಪ-ಅಮ್ಮ ನಂಗೆ ಪಾಕೆಟ್ ಮನಿ ಕೊಡ್ತಿಲ್ಲ ಕಣೋ..
ಶಿವ:- ಅವರ ಹತ್ರಾನೇ ಸಾಲ ಕೇಳು.., ನನ್ ಮದ್ವೆ ಆದಮೇಲೆ ವಾಪಸ್ ಕೊಡ್ತೀನಿ ಅಂತಾ ಹೇಳು.. ವರ್ಕ್ ಔಟ್ ಆಗುತ್ತೆ….